Sunday, November 11, 2012

ಮೈನಾವತಿ ಸಿನಿ ಹೃದಯವಂತರ ನೆನಪುಗಳಿಂದ ಮಾಣಿಕ್ಯ (2012)


ಅರವತ್ತು ಎಪ್ಪತ್ತರ ದಶಕದ ಸಿನಿಮಾಗಳನ್ನು ನೋಡಿದವರಿಗೆ ನೋಡಲು ಇಚ್ಚಿಸುವವರಿಗೆ ಪಂಡರಿಬಾಯಿ ಮತ್ತು ಮೈನಾವತಿ ಮರೆಯಲಾರದ ಹೆಸರುಗಳು. 

ಅಕ್ಕ ಪಂಡರಿಬಾಯಿ ಸಾಧು ಸ್ವಭಾವದ ಪಾತ್ರಗಳನ್ನೂ ಮಾಡಿ "ಅಮ್ಮ" ಎಂದರೆ ಹೀಗೆ ಇರುತ್ತಾರೆ ಎನ್ನಿಸುವಷ್ಟು ನೈಜತೆ ಮೆರೆದಿದ್ದಾರೆ

ಆದರೆ ಮೈನಾವತಿ ಘಟವಾಣಿ, ಜಂಭದ ಹುಡುಗಿ, ಹಟಮಾರಿ, ಮತ್ತು ಹಾಸ್ಯ ಪಾತ್ರಗಳಿಂದ ರಂಜಿಸುತಿದ್ದರು. 


ಕನ್ನಡ ಚಿತ್ರಗಳಲ್ಲಿ ಬಾಲಕೃಷ್ಣ ನರಸಿಂಹರಾಜು ಇವರಿಬ್ಬರನ್ನು ಪರದೆಯ ಮೇಲೆ ಹುರಿದು ಮುಕ್ಕುವಂತೆ ಅಭಿನಯಿಸುತಿದ್ದ ಪಾತ್ರಗಳು ಇಂದಿಗೂ ಜೀವಂತ.

ಇಂತಹ ಕಲಾವಿದೆಯನ್ನ ದೇವರು ಸಹ ಬಿಟ್ಟಿರಲಾರ ಎನ್ನಿಸುತ್ತದೆ, ಕಾರಣ ಅವರು ಚಿತ್ರಗಳಲ್ಲಿ ಗೋಳುಹುಯ್ದುಕೊಂಡ ಬಾಲಣ್ಣ, ನರಸಿಂಹರಾಜು, ಕಲ್ಯಾಣ್ ಕುಮಾರ್ ಎಲ್ಲರು ದೇವರ ಬಳಿ ಇರುವಾಗ ಇವರನ್ನು ಕರೆದು ಕೊಂಡು ಬಿಟ್ಟ..

ಈ ಕಲಾವಿದೆಯನ್ನ ಕಪ್ಪು ಬಿಳುಪು ಚಿತ್ರಗಳಲ್ಲಿ ನೋಡುವುದೇ ಒಂದು ಸುಂದರ ಅನುಭವ..ಮರೆಯಾಗದಿರಲಿ ಈ ಮಾಣಿಕ್ಯ ಸಿನಿ ಹೃದಯವಂತರ ನೆನಪುಗಳಿಂದ!!!


4 comments:

  1. ತನ್ನ ಅಮೋಘ ಕಣ್ಣುಗಳ ಅಭಿನಯ ಮತ್ತು ನಿಂದ ಜನ ಜನಿತವಾಗಿದ್ದ ಲವಲವಿಕೆಯ ನಟಿಯ ಕಣ್ಮರೆ ನಮಗೆ ತುಂಬಲಾರದ ನಷ್ಟ.

    ಇಂತಹ ಮರೆತ ಪ್ರತಿಭೆಗಳು ಚಿತ್ರರಂಗದಿಂದ ಮರೆಯಾಗುವುದು ಶ್ರೀ ಸಾಮಾನ್ಯನ ಗಮನಕ್ಕೂ ಬರಲಾರದು!

    ReplyDelete
    Replies
    1. ತೆರೆಯ ಮೇಲಿದ್ದರೆ ಎಲೆ ಮರೆಯಲ್ಲಿನ ಜೀವನ ಬಹಳ ತ್ರಾಸದಾಯಕ.ಕಲಾವಿದರ ಅಂತ್ಯ ಸಾಮಾನ್ಯ ದುರಂತವಾಗಿಯೋ ..ಇಲ್ಲವೇ ಅಜ್ನಾತವಾಗಿಯೋ ಆಗುವುದು ಒಂದು ವಿಪರ್ಯಾಸ..ಧನ್ಯವಾದಗಳು ಬದರಿ ಸರ್ ನಿಮ್ಮ ಹೃದಯ ತುಂಬಿದ ಶ್ರದ್ದಾಂಜಲಿಯಾ ಪದಗಳಿಗೆ

      Delete
  2. ಈ ಲೇಖನದಲ್ಲಿ ಬಳಸಲಾಗಿರುವ ಭಾವಚಿತ್ರ ಮೈನಾವತಿಯವರದ್ದಲ್ಲ. ಇನ್ನೋರ್ವ ಸುಪ್ರಸಿದ್ಧ ದಕ್ಷಿಣ ಭಾರತದ ನಟಿ ರಾಜಸುಲೋಚನಾ ಅವರದ್ದು.

    ReplyDelete
  3. ಶ್ರೀಕಾಂತ್ ಅವರೇ
    ಫೋಟೋ ಮೈನವತಿ ಅವರದ್ದಲ್ಲ...
    ದಯಮಾಡಿ ಸರಿಪಡಿಸಿ

    ReplyDelete